ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಆರು ತಿಂಗಳ ಮಗು ಆಗಿರುವಾಗಲೇ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಪ್ಪು ನಟನೆ ಜೊತೆಗೆ ಗಾಯಕರಾಗಿಯೂ ತನ್ನದೇಯಾದ ಛಾಪು ಮೂಡಿಸಿದ್ದರು. ತಮ್ಮ ಚಿತ್ರಗಳಿಗೆ ಮಾತ್ರವಲ್ಲದೇ ಬೇರೆ-ಬೇರೆ ಸಿನಿಮಾಗಳಿಗೂ ಹಾಡುವ ಮೂಲಕ ಗಾಯಕರಾಗಿ ಗುರುತಿಸಿಕೊಂಡಿದ್ದರು. ಭಾಗ್ಯವಂತ ಸಿನಿಮಾದಲ್ಲಿ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡಿನಿಂದ ಹಿಡಿದು ಸುಮಾರು 95 ಹಾಡುಗಳಿಗೆ ಧ್ವನಿಯಾಗಿದ್ದಾರೆ. ಅಪ್ಪು ಬಾಲನಟರಾಗಿ ಹಾಡಿದ ಬೆಸ್ಟ್ ಹಾಡುಗಳ ಪಟ್ಟಿ ಇಲ್ಲಿದೆ.